ಮಕ್ಕಳ ಭವಿಷ್ಯಕ್ಕಾಗಿ ಸಮಗ್ರ ಶಿಕ್ಷಣ
“ಪಟ್ಟೂರು” ಬೆಳ್ತಂಗಡಿ ತಾಲೂಕಿನ ಕೊಕ್ಕಡ ಮತ್ತು ಧರ್ಮಸ್ಥಳವನ್ನು ಸಂಪರ್ಕಿಸುವ ಗ್ರಾಮೀಣ ರಸ್ತೆಯ ಪಕ್ಕದಲ್ಲಿರುವ ,ಉದ್ಯೋಗದಲ್ಲಿ 90 % ಜನ ಕೃಷಿಕರಾಗಿರುವ ಸುಮಾರು 2500 ಜನರು ವಾಸಿಸುವ ,ಪಟ್ರಮೆ ಗ್ರಾಮದಲ್ಲಿರುವ ಪುಟ್ಟ ಊರು .
ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ
ನಮ್ಮ ಶಾಲೆ ಆಧುನಿಕತೆಯೊಂದಿಗೆ ಕನ್ನಡದ ಪರಂಪರೆಯ ಮಧ್ಯೆ ಸೇತುವೆ ನಿರ್ಮಿಸುತ್ತಿದೆ., ಹಾದಿಯಲ್ಲಿ ಅಸಂಖ್ಯ ಜನ್ಮಜ್ಞಾನವನ್ನು ಹೊತ್ತು ಸಾಗುವ ಪರ್ವತದಂತೆ, ನಮ್ಮ ಶಿಕ್ಷಣವೂ ದೀರ್ಘ ಹಾಗೂ ಶ್ರೀಮಂತವಾಗಿದೆ.
ನಮ್ಮ ಮಕ್ಕಳನ್ನು ಜ್ಞಾನ, ಶಿಸ್ತು, ಮತ್ತು ಮೌಲ್ಯಗಳ ದೀಪಗಳಾಗಿ ಬೆಳಗಿಸುತ್ತಾ, ನಾವು ಅವರ ಮುಂದಿನ ಪಯಣವನ್ನು ಪ್ರಜ್ಞಾಪೂರ್ಣವಾಗಿ ದಿಕ್ಕು ತೋರುತ್ತೇವೆ.
ಶ್ರೀ ರಾಮ ವಿದ್ಯಾಸಂಸ್ಥೆಯಲ್ಲಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಭವಿಷ್ಯದ ಚುಕ್ಕಿಯಂತೆ, ತನ್ನದೇ ಆದ ಬೆಳಕಿನಿಂದ ಪ್ರಕಾಶಿಸುವ ಶಕ್ತಿ ಹೊಂದಿರುತ್ತಾನೆ.ಎಲ್ಲಾ ಮಕ್ಕಳಿಂದೊಂದು ಉತ್ತಮ, ಸಮೃದ್ಧ ಮತ್ತು ಉದಾತ್ತ ಭವಿಷ್ಯವನ್ನು ರೂಪಿಸುವಲ್ಲಿ ಈ ವಿದ್ಯಾಸಂಸ್ಥೆಯು ನಿರಂತರವಾಗಿ ಶ್ರಮಿಸುತ್ತಿದೆ.
ನಮ್ಮ ವಿದ್ಯಾಸಂಸ್ಥೆ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಭಾರತೀಯ ಮಾದರಿಯ ಶಿಕ್ಷಣ ನೀಡುತ್ತಿದೆ .”ಶಿಕ್ಷಣ” ಎಂಬುದು ಜೀವ ಸಂಕುಲದ ಅನಿವಾರ್ಯತೆಗಳಲ್ಲೊಂದು ,ನಮ್ಮ ವಿದ್ಯಾಸಂಸ್ಥೆಯ ಧ್ಯೇಯವಾಕ್ಯ “ಯಾ ವಿದ್ಯಾ ಸಾ ವಿಮುಕ್ತಯೇ ” ಎಂಬ ವಾಣಿಯಂತೆ ಸಕಲ ಪೀಡನೆಗಳಿಗೂ ವಿದ್ಯೆಯೇ ಪರಿಹಾರವಾಗಿದೆ .ಅದರಲ್ಲೂ ನಮ್ಮ ವಿದ್ಯಾಸಂಸ್ಥೆ ಶಿಕ್ಷಣದಲ್ಲಿ ಭಾರತೀಯತೆಯನ್ನು ಮೂಡಿಸಿ ಸಂಸ್ಕಾರ ,ಆತ್ಮಸ್ಥೈರ್ಯ ಮತ್ತು ರಾಷ್ಟ್ರೀಯತೆ ಇವುಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿ ವ್ಯಕ್ತಿ ನಿರ್ಮಾಣದ ಪ್ರಯತ್ನದಲ್ಲಿ ತೊಡಗಿದೆ .ಶಾಲೆಯು ಸರಸ್ವತಿ ವಂದನಾದಿಂದ ಪ್ರಾರಂಭವಾಗಿ ಧ್ಯಾನ ,ಪ್ರಾಣಾಯಾಮ ,”ಓಂ” ಕಾರ ,ಶೋಕ್ಲಾಗಳು ,ಮಹಾಪುರುಷರ ವಾಣಿ,ಯೋಗ ಶಿಕ್ಷಣ ,ಭಜನೆ ಮುಂತಾದ ಮೌಲಯುತ ವಿಚಾರಗಳನ್ನು ಮಗುವಿನಲ್ಲಿ ಉದ್ಥೀಪನಗೊಳಿಸುವ ಮೂಲಕ ಸಂಸ್ಕಾರ ಬೆಳೆಸುವ ಉದ್ದೇಶ ನಮ್ಮದಾಗಿದೆ.
ಮಿಷನ್
ನಮ್ಮ ಮಿಷನ್, ಜ್ಞಾನವೇ ಜೀವನದ ಮೂಲ ಎಂಬ ಧ್ಯೇಯವಾಕ್ಯದೊಂದಿಗೆ, ಪ್ರತಿಯೊಬ್ಬ ಮಕ್ಕಳನ್ನು ವಿದ್ಯೆಯ ಹೂವಿನಂತೆ ಅರಳಿಸಲು, ಅವರ ಮನಸ್ಸುಗಳಲ್ಲಿ ಶಿಷ್ಟತೆ, ಆದರ್ಶ, ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಮೂಲಕ, ಸಮಾಜಕ್ಕೆ ತಾಜಾ ತಂಪು ಹಾಸುವ ಬೊಮ್ಮೆಯಂತೆಯೇ ರೂಪಿಸುವುದು.
ವಿಷನ್
ನಮ್ಮ ದೃಷ್ಟಿ, ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಜ್ಞಾನ, ಸೌಜನ್ಯತೆ, ಮತ್ತು ಸಂಸ್ಕಾರದ ಗುರಿಯತ್ತ ಮುನ್ನಡೆಯುವ ಬೆಳಕಿನ ಕಿರಣವಾಗಿ, ಸಮೃದ್ಧ ಭವಿಷ್ಯವನ್ನು ನಿರ್ಮಿಸಲು, ಕನ್ನಡದ ಮಣ್ಣಿನ ಸೊಗಡನ್ನು ಹರಡುವ, ವಿಶ್ವದ ಮಟ್ಟದಲ್ಲಿ ಪ್ರತಿಷ್ಠಿತನಾಗುವ ವಿಶ್ವಮಾನವನಂತೆ ತಯಾರಿಸುವುದು.
Join Our Community
Enter your email address to register to our newsletter subscription delivered on regular basis!